ಚಿತ್ರ: ಆ ದಿನಗಳು
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ಇಳಯರಾಜ
ಗಾಯನ: ಇಳಯರಾಜ, ನಂದಿತ

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ |೨|

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ಬಾನಾಡಿಗೊಂದು ಸವಿ ಮಾತು ಕಲೆಸುವ
ಆ ವೀಣೆಗೊಂದು ಎದೆರಾಗ ತಿಳಿಸುವ

ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೊಡುವ

ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು, ನೀನು ಯಾಕೆ?

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ 

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ

Category: ಕನ್ನಡ ಚಿತ್ರಸಾಹಿತ್ಯ
Category: ಆ ದಿನಗಳು ಚಿತ್ರ
Category: ಕೆ. ಕಲ್ಯಾಣ್ ಸಾಹಿತ್ಯ
ವರ್ಗ: ಇಳಯರಾಜ ಗಾಯನ
ವರ್ಗ: ನಂದಿತ ಗಾಯನ